e
Sanchaya Uthsava
ಕಳೆದ ನಾಲ್ಕು ದಶಕಗಳಿಂದ “ನಾಟಕ ನಿರಂತರ” ಎಂಬ ಧ್ಯೇಯದೊಂದಿಗೆ ಕನ್ನಡ ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಂಚಯ ತಂಡ ಇದೀಗ ತಂಡದ ಸಂಸ್ಥಾಪಕರಾದ ಜಿ ಎಸ್ ಆರ್ ಅವರ ನೆನಪಿನಲ್ಲಿ ಮೂರು ದಿನಗಳ ನಾಟಕೋತ್ಸವವನ್ನು ಆಯೋಜಿಸಿದೆ.

ವೃತ್ತಿಯಲ್ಲಿ ಹೈಸ್ಕೂಲ್ ಮೇಷ್ಟ್ರು ಆಗಿದ್ದರೂ  ನಾಟಕ ಸಂಗೀತ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಜಿ ಎಸ್ ಆರ್ ತಮ್ಮ ಶಾಲೆಯಲ್ಲಿ ಕಲಿತ ಶಿಷ್ಯರನ್ನು ಒಟ್ಟುಮಾಡಿ ೧೯೮೮ ರಲ್ಲಿ ಸಂಚಯವನ್ನು ಆರಂಭಿಸಿದರು.  ತಮ್ಮ ಜೀವನದ ಕೊನೆಯವರೆಗೂ ಸಂಚಯಕ್ಕಾಗಿ ಹಾಗು ಕನ್ನಡ ರಂಗ ಭೂಮಿಗಾಗಿ ನಿರಂತರವಾಗಿ ತಮ್ಮ ತನು ಧನ ಮನವನ್ನು ಮುಡಿಪಾಗಿಸಿದರು. ಅವರು ಹಾಕಿದ ಅಡಿಪಾಯದಲ್ಲಿ ಬೆಳೆದ ಸಂಚಯ ಕಳೆದ ೪ ದಶಕಗಳ ಪಯಣದಲ್ಲಿ ೫೦ಕ್ಕೂ ಹೆಚ್ಚು ನಾಟಕಗಳನ್ನು, ಹಲವಾರು ಕಾರ್ಯಾಗಾರಗಳನ್ನು, ಬೀದಿ ನಾಟಕಗಳನ್ನು ಆಯೋಜಿಸಿದೆ.

ಪ್ರಸ್ತುತ ನಾಟಕೋತ್ಸವದಲ್ಲಿ ಮೂರು ನಾಟಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ.
ಮತ್ತಾಯ 22:39
Mattaya
ತಂಡ: ಅಸ್ತಿತ್ವ, ಮಂಗಳೂರು 
ಬರಹಗಾರ: ಅರುಣ್ ಲಾಲ್ 
ನಿರ್ದೇಶಕ: ಅರುಣ್ ಲಾಲ್ 

ಮತ್ತಾಯ 22:39 ನಾಟಕವು ಪ್ರೀತಿ, ದ್ವೇಷ, ಸ್ವಾರ್ಥ ದ್ರೋಹದಂತಹ ವಿಷಯಗಳನ್ನು ಆಳವಾಗಿ ಪರಿಶೋಧಿಸುತ್ತದೆ. ಇದು  ಭೀಕರ ಬರಗಾಲದಲ್ಲಿ ಬದುಕುಳಿದ ಇಬ್ಬರು ಸ್ನೇಹಿತರ ಕಥೆಯಾಗಿದೆ. ಬರಗಾಲ ತೀವ್ರಗೊಂಡಂತೆ, ಅವರ ಸ್ನೇಹ ಪರೀಕ್ಷೆಗೆ ಒಳಪಡುತ್ತದೆ ಮತ್ತು ಅವರು ಪರಸ್ಪರ ವಿರೋಧಿಗಳಾಗಲು ಪ್ರಾರಂಭಿಸುತ್ತಾರೆ. ಬದುಕುಳಿಯಲು ಹೋರಾಡುವಾಗ ನಾವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಹಾಗೂ ಮಾನವ ಸಂಬಂಧಗಳ ಸೂಕ್ಷ್ಮ ಸ್ವರೂಪದ ಬಗ್ಗೆ ಆಲೋಚಿಸಲು ಈ ನಾಟಕ ನಮ್ಮನ್ನು ಪ್ರೇರೇಪಿಸುತ್ತದೆ.

ಬಾಸಿಂಗ ಬಲ
Basinga Bala
ತಂಡ: ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ), ಸವದತ್ತಿ
ಬರಹಗಾರ: ಶ್ರೀನಿವಾಸ ವೈದ್ಯ 
ನಿರ್ದೇಶಕ: ಝಕೀರ್ ನದಾಫ್

ಶ್ರೀನಿವಾಸ ವೈದ್ಯ ಅವರ ‘ಮನಸುಖರಾಯನ ಮನಸು’ ಕಥಾ ಸಂಕಲನದಲ್ಲಿರುವ ‘ಬಾಸಿಂಗಬಲ’ ಎಂಬ ಕಥೆಯನ್ನು ಆಧರಿಸಿದ ಈ ನಾಟಕ ಮೇಲ್ನೋಟಕ್ಕೆ ಒಂದು ಹಾಸ್ಯಮಯ ಕಥೆಯಂತೆ ಕಂಡರೂ ವಿಧವಾ ಪುನರ್ವಿವಾಹದಂತಹ ಗಂಭೀರ ವಿಷಯವನ್ನು ಪ್ರತಿಪಾದಿಸುತ್ತದೆ.

ಜ್ಞಾತಪರ್ವ
Jnataparva
ತಂಡ: ನೆನೆಪು, ಬೆಂಗಳೂರು  
ಬರಹಗಾರ: ಕಾರ್ತಿಕ್ ಭ
ನಿರ್ದೇಶಕ: ಪುನೀತ್ ರಂಗಾಯಣ

ತಮ್ಮ ವನವಾಸದ ಸಮಯದಲ್ಲಿ, ಪಾಂಡವರು ತಮ್ಮ ನಿಜವಾದ ಗುರುತನ್ನು ಮರೆಮಾಚಿ ರಾಜ ವಿರಾಟನ ಅರಮನೆಯಲ್ಲಿ ವಿವಿಧ ಕೆಲಸಗಳನ್ನು ಮಾಡಿಕೊಂಡಿದ್ದರು. ಅವರ ಜೊತೆಗೆ ದ್ರೌಪದಿಯೂ ರಾಣಿ ಸುದೇಷ್ಣೆಗೆ ಸೈರಂಧ್ರಿ ಎಂಬ ಹೆಸರಿನಲ್ಲಿ ದಾಸಿಯಾಗಿ ಸೇವೆ ಮಾಡುತ್ತಿದ್ದಳು. ಈ  ನಾಟಕವು ಅಜ್ಞಾತವಾಸದ ಸಮಯದಲ್ಲಿ ಸಂಭವಿಸಿದ ಮಹತ್ವದ ಘಟನೆಯನ್ನು ಆಧರಿಸಿದೆ.  

ಸಂಜೆ 5:30-6:30
ಸಾಂಸ್ಕೃತಿಕ ಕಾರ್ಯಕ್ರಮ
Day 1: ರಂಗಗೀತೆಗಳು – ಸಂಚಯ
Day 2: ಕಿರು ನಾಟಕ – ರಿವ್ಯೂ ಥಿಯೇಟರ್ ಕಲೆಕ್ಟಿವ್
Day 3: ಕಿರು ನಾಟಕ – ಸಂಚಾರಿ ಥಿಯೇಟರ್
Book your tickets
ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ